Monday, 10 March 2025

ಸರಕಾರಿ ಗಾಯರಾಣ ಜಮೀನು ರಕ್ಷಣೆಗಾಗಿ ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ



ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸರಕಾರಿ ಗಾಯರಾಣ ಅತಿಕ್ರಮಣವಾಗಿದ್ದು ಒಟ್ಟು 148.29 ಎಕರೆ ಆಸ್ತಿ ಇದ್ದು ಇದನ್ನು ಸವರ್ಿ ಮಾಡಿ ಅತಿಕ್ರಮಣದಾರರನ್ನು ತೆರವುಗೋಳಿಸಬೇಕೆಂದು ಈ ಹಿಂದೆ ಸಂಭಂದಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಸಾರಿ ಮನವಿ ಸಲ್ಲಿಸಿದರು ಕೇವಲ ಭರವಸೆಯನ್ನು ಮಾತ್ರ ನೀಡುತ್ತೀದ್ದು, ಬೇಡಿಕೆಯು ಈಡೇರದ ಕಾರಣ ದಿ-16ರಂದು ಮು, 10 ಗಂ ಮುಗಳಖೋಡ ಪುರಸಭೆಯ ಆವರಣದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಇನ್ನೂ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ಮುಖಂಡರಾದ ಸುರೇಶ ಹೊಸಪೇಟಿ, ಭೀಮಪ್ಪ ಬನಶಂಕರಿ ಹೇಳಿದರು.

ಉಪವಾಸ ಸತ್ಯಾಗ್ರಹ ನಿರತರ ಸ್ಥಳಕ್ಕೆ ಆಗಮಿಸಿದ ಕುಡಚಿ ಕಂದಾಯ ನಿರೀಕ್ಷಕ ಬಿ.ಜಿ.ದಾನೋಳಿ ಮತ್ತು ಗ್ರಾಮ ಲೇಕ್ಕಾಧಿಕಾರಿ ಎಸ.ಎಸ.ಹತ್ತರಕಿ ಅವರು ಭೇಟಿ ನೀಡಿ ಈಗಾಗಲೇ ಭೂಮಾಪನ ಇಲಾಖೆಯವರಿಗೆ ಮುಗಳಖೋಡ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗಾಯರಾಣ ಜಮೀನು ಸವರ್ಿ ಮಾಡಿ ಕೊಡಬೇಕೆಂದು ಕಂದಾಯ ಇಲಾಖೆ ವತಿಯಿಂದ ಲಿಖಿತ ಅಜರ್ಿಯನ್ನು ಸಲ್ಲಿಸಲಾಗಿತ್ತು ಆದರೆ ವಿಳಂಬವಾಗಿದೆ. ಸೊಮವಾರ ಭೂಮಾಪನ ಇಲಾಖೆಯ ಅಗತ್ಯ ಸಿಬ್ಬಂದಿಯನ್ನು ಕರೆತಂದು ಗಾಯರಾಣ ಜಮೀನು ಸವರ್ಿ ಕಾರ್ಯ ಪ್ರಾರಂಬಿಸುವದಾಗಿ ಹೇಳಿ ಉಪವಾಸನಿರತರನ್ನು ಮನವಲಿಸಲು ಪ್ರಯತ್ನಿಸಿದರೂ ಕೂಡಾ ಧರಣಿ ಕೈ ಬಿಡುವದಿಲ್ಲವೆಂದು ಸ್ಥಳೀಯ ಮುಖಂಡರು ಅಧಿಕಾರಿಗಳಿಗೆ ಸಮಜಾಯಿಸಿದರು. ಹಾರೂಗೇರಿ ಪುರಸಭೆ 5 ಎಕರೆ ಹಾಗೂ ಕಂಕಣವಾಡಿ ಪಟ್ಟಣ ಪಂಚಾಯಿತಿಗೆ 5 ಎಕರೆ ಗಣತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಒಟ್ಟು 10 ಎಕರೆ ಭೂಮಿಯನ್ನು ಮುಗಳಖೋಡ ಪಟ್ಟಣದಿಂದ ಕೊಟ್ಟದ್ದು ಯಾವ ನ್ಯಾಯ? ಅದನ್ನು ಮರಳಿ ಪಡೆಯಲು ಕೂಡಲೆ ಭೂಮಾಪನ ಇಲಾಖೆ, ಕಂದಾಯ ಇಲಾಖೆಯವರು ಸವಿ ಮಾಡಿಸಿ ಗುರುತು ಕಾರ್ಯ ಮಾಡಬೇಕು ಒತ್ತು ವರಿದಾರರನ್ನು ತೆರವುಗೊಳಿಸುವವರೆಗೆ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲವೆಂದು ಹೇಳಿದರು.

ಈ ಸತ್ಯಾಗ್ರಹದಲ್ಲಿ ಭೀಮಪ್ಪ ಜಾಗನೂರ, ಸುಖದೇವ ಕರಿಭೀಮಗೋಳ, ಹಣಮಂತ ಬಾಬಣ್ಣವರ, ಭಗವಂತ ಹಿಪ್ಪರಗಿ,ಚಂದ್ರಕಾಂತ ಗೌಲತ್ತಿನವರ, ಗಿರಮಲ್ಲ ನಡವಿನಕೇರಿ, ಕಲ್ಲಪ್ಪ ಗೌಲತ್ತಿನವರ, ಚೇತನ ನಡವಿನಕೇರಿ, ಕಪಿಲ ಕರಭೀಮಗೋಳ, ಸುಭಾಸ ಮುನ್ಯಾಳ, ಮಹಾಂತೇಶ ಬಳಿಗಾರ, ಹಾಗೂ ಇತರ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ.

ಯಲ್ಲಮ್ಮನಗುಡ್ಡಕ್ಕೆ ಗಾಯರಾಣ ಜಾಗ ನೀಡಲು ವಿರೋಧ

 


ಉಗರಗೋಳ: ಉಗರಗೋಳ ಗ್ರಾಪಂನ 1,097 ಎಕರೆ ಗಾಯರಾಣ ಜಾಗವನ್ನು ಯಲ್ಲಮ್ಮನ ಗುಡ್ಡಕ್ಕೆ ನೀಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಹನುಮಂತ ದೇವರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಗರಗೋಳ, ಹರ್ಲಾಪುರ ಮತ್ತು ಯಲ್ಲಮ್ಮ ತಾಂಡೆಗಳ ಗ್ರಾಮಸ್ಥರ ಸಾರ್ವಜನಿಕ ಸಭೆಯಲ್ಲಿ ಗಾಯರಾಣ ವ್ಯಾಜ್ಯ ಸಂಧಾನದ ಬದಲಿಗೆ, ನ್ಯಾಯಾಲಯದಲ್ಲೇ ಇತ್ಯರ್ಥ್ಯವಾಗಲಿ ಎಂದು ನಿರ್ಧರಿಸಲಾಯಿತು.

ಗ್ರಾಮಸ್ಥ ಚಂದ್ರಶೇಖರ ಹಳ್ಳದ ಮಾತನಾಡಿ, ಯಲ್ಲಮ್ಮ ದೇವಸ್ಥಾನದ ಮೂಲವೇ ಉಗರಗೋಳ ಗ್ರಾಮ. ಇಲ್ಲಿ ಯಲ್ಲಮ್ಮ ದೇವಿಯ ಅರ್ಚಕರ ಮನೆತನಗಳಿವೆ. ಆದರೆ, ಈ ಮೂಲವಾಸಿಗಳನ್ನೇ ಹೊರಗಿಡುವ ಹುನ್ನಾರ ನಡೆದಿದೆ ಎಂದರು.
ಮಂಜುನಾಥಗೌಡ ರೇಗೌಡರ ಮಾತನಾಡಿ, ಸಾವಿರಾರು ಎಕರೆ ಭೂಮಿ ನೀಡಲು ಸಾಧ್ಯವಿಲ್ಲ. ಮೊದಲು 10 ಎಕರೆ ಪಡೆದು ಅಭಿವದ್ಧಿಪಡಿಸಿ. ನಿಮ್ಮ ಕಾರ್ಯದಿಂದ ತಪ್ತಿಯಾದಲ್ಲಿ, ನಾವೇ ಭೂಮಿ ಕೊಡಲು ಮುಂದೆ ಬರುತ್ತೇವೆ ಎಂದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ ಮಾತನಾಡಿ, ದೇವಸ್ಥಾನದ ಅಭಿವದ್ಧಿ ಕುರಿತು ಗ್ರಾಮಸ್ಥರಿಂದ ಮೊದಲು ಹಾಗೂ ಸದ್ಯ ಯಾವುದೂ ಅಡೆತಡೆ ಮಾಡಿಲ್ಲ. ಗುಡ್ಡದ ಅಧಿಕಾರಿಗಳಿಂದ ಗ್ರಾಮಕ್ಕೆ ಆಗುವ ಅನ್ಯಾಯದ ಕುರಿತು ಹೋರಾಟ ನಡೆಸಲಾಗಿದೆ ಎಂದರು.

ಗುರುನಾಥ ಗಾಂಜಿ ಮಾತನಾಡಿದರು. ನಿಂಗನಗೌಡ ಹರಳಕಟ್ಟೆ, ಶಂಕ್ರೆಮ್ಮ ಮುದ್ರಗಣಿ, ರಾಜೇಸಾಬ ಬಾರಿಗಿಡದ, ಮಡಿವಾಳಪ್ಪ ತಳವಾರ, ಯಲ್ಲಪ್ಪಗೌಡ ಗಂದಿಗೌಡರ, ಕಷ್ಣಪ್ಪ ಲಮಾಣಿ, ನೆಹರು ಬಡೆಪ್ಪನವರ, ಪ್ರಕಾಶ ಲಮಾಣಿ, ವಿಠಲ ಸಿದ್ಧಕ್ಕನವರ, ಯಲ್ಲಪ್ಪಗೌಡ ಪೋಲೇಶಿ, ಅಜ್ಜಪ್ಪಗೌಡ ಪೋಲೇಶಿ, ನೀಲಪ್ಪ ಸಿದ್ದಕ್ಕನವರ, ವೈ.ವೈ.ಕಾಳಪ್ಪನವರ, ರಾಮನಗೌಡ ತಿಪರಾಶಿ, ಬಸನಗೌಡ ಪಾಟೀಲ, ಅಪ್ಪು ಕಾಳಪ್ಪನವರ, ಶಿವನಗೌಡ ಗಂದಿಗೌಡರ, ಉಮೇಶ ದಿಡಗನ್ನವರ, ರಮೇಶ ಕರೀಕಟ್ಟಿ, ನಿಂಗಪ್ಪ ಬಡೆಪ್ಪನವರ, ಶರೀಫ್‌ಸಾಬ ಬಾರಿಗಿಡದ, ಸಂತೋಷ ಕಲಾಲ, ಗಣೇಶ ವಾಕೋಡಿ, ಕರೆಪ್ಪ ತಳವಾರ, ಮಹೇಶ ಚಪ್ಪರಮನಿ, ಶಂಕರಗೌಡ ರೇಷ್ಮೆಗೌಡರ, ಬುಡೇಸಾಬ ಬಾರಿಗಿಡದ, ಮಂಜುನಾಥ ಗುಡೆನ್ನವರ ಇದ್ದರು.

Saturday, 1 March 2025

Grama Panchayath Should prepare and Present the Budget 2025

The Department of Rural Development has instructed the 5949 gram panchayats of the state to present the budget and get approval from the taluk panchayat Karnataka Gram Swaraj 
and Panchaytraj Act 1993 
GP to prepare a budget including grants available to them under various heads in the next financial year and development projects to be undertaken. 

This process should be completed by March 10. People friendly budget presented, approved. Rural Development and Panchayat Raj Minister Priyank Khar has directed to get it.