ಕುರಿಗಳೊಂದಿಗೆ ತಾಲ್ಲೂಕು ಕಚೇರಿಗೆ ಮುತ್ತಿಗೆ - ನ್ಯಾಮತಿ ತಾಲ್ಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ಕುರಿ ಹಿಂಡಿನೊಂದಿಗೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಪ್ರಜಾವಾಣಿ ವಾರ್ತೆ
ನ್ಯಾಮತಿ: 'ತಾಲ್ಲೂಕಿನ ದೊಡ್ಡತ್ತಿ-ನಹಳ್ಳಿ ಗ್ರಾಮದ ಸರ್ವೆ ನಂ. 32ರ ಜಾಗವನ್ನು ಸಿವಿಲ್ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿರುವ ಆದೇಶ ರದ್ದುಪಡಿಸಿಬೇಕು' ಎಂದು ಆಗ್ರಹಿಸಿ ಗ್ರಾಮಸ್ಥರು ನೂರಾರು ಕುರಿಗಳೊಂದಿಗೆ ಸೋಮವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
'ಕುಂಕುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ 35 ವರ್ಷಗಳಿಂದ ಈ ಗೋಮಾಳವನ್ನು ಬಳಸುತ್ತಿದ್ದೇವೆ. 2016-17 ಸಾಲಿನಲ್ಲಿ ನಿವೇಶನಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಅರ್ಜಿ ಹಾಕಿದ್ದೇವೆ. 6 ತಿಂಗಳ ಹಿಂದೆ ನಡೆದ ಗ್ರಾಮ ಸಭೆಯಲ್ಲಿ 300 ಜನರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಗ್ರಾಮದಲ್ಲಿ ಅಂದಾಜು 5 ಸಾವಿರ ಕುರಿಗಳಿವೆ. ಇಷ್ಟೆಲ್ಲಾ ಮಾಹಿತಿ ಇದ್ದರೂ, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿರುವುದು ಸರಿಯಲ್ಲ' ಎಂದು ಪ್ರತಿಭಟನಕಾರರು ದೂರಿದರು.
'ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಜಾಗ ನೀಡುವುದಿಲ್ಲ. ನಮ್ಮ ಭೂಮಿ ನಮ್ಮ ಹಕ್ಕು. ಕಟ್ಟಡ ನಿರ್ಮಾಣಕ್ಕೆ ನೀಡಿರುವ ಆದೇಶವನ್ನು ರದ್ದುಪಡಿಸಬೇಕು' ಎಂದು ಆಗ್ರಹಿಸಿದರು.
'ಗ್ರಾಮ ಆಡಳಿತಾಧಿಕಾರಿ ಕುರಿಗಾಹಿಗಳಿಗೆ ನಿಂದನೆ ಮಾಡಿದ್ದಾರೆ. ಅವರನ್ನು ವಜಾ ಮಾಡಬೇಕು' ಎಂದು ಆಗ್ರಹಿಸಿದರು. ತಹಶೀಲ್ದಾರ್‌ಗೆ ಮನವಿ
ಬಿಜೆಪಿ ಮುಖಂಡ ಎಂ.ಆರ್. ಮಹೇಶ, ದಲಿತ ಸಂಘಟನೆ ಮುಖಂಡ ಗುಡದಯ್ಯ, ಮುಖಂಡರಾದ ಎಸ್. ಗುರುಮೂರ್ತಿ, ಸಿದ್ದೇಶ, ಎಚ್.ಚಿಕ್ಕಪ್ಪ, ಸ್ಫೂರ್ತಿ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಗ್ರಾಮಸ್ಥರ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸಲಾಗುವುದು. ತೀರ್ಮಾನದಂತೆ ಳ್ಳಲಾಗುವುದು ತಹಶೀಲ್ದಾರ್ ತಿಳಿಸಿದರು. ಮೇಲಧಿಕಾರಿಗಳ ಕ್ರಮ

No comments:
Post a Comment